ಚಿತ್ರ: ಗೀತ 

ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಇಳಯ ರಾಜ
ಗಾಯನ: ಎಸ್. ಪಿ. ಬಾಲ ಸುಬ್ರಮಣ್ಯಂ, ಎಸ್. ಜಾನಕಿ

ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು 
ಹೊಸ ಹರುಷವ ತರುವೆನು ಇನ್ನೂ ಎಂದು 
ಓ ಎಂಥ ಮಾತಾಡಿದೆ ಇಂದು ನೀ ಎಂಥ ಮಾತಾಡಿದೆ, ನನ್ನ ಮನಸಿನ ಭಾವನೆ ನೀನೇ ಹೇಳಿದೆ 
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು 

ಪ್ರೀತಿಯೆಂದರೇನು ಎಂದು ಈಗ ಅರಿತೆನು (೨) 
ಸವಿನುಡಿಯಲಿ ತನುವರಳಿತು, ಸವಿಗನಸಲಿ ಮನ ಕುಣಿಯಿತು 
ಒಲವಿನ ಈ ಮಾತಿಗೆ, ಕರಗಿ ಹೋದೆ ನೋಟಕೆ 
ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ 
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು 

ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ (೨) 
ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ 
ಕಾಮನ ಬಿಲ್ಲೇರುವ, ಜಾರುತಾ ನಾವಾಡುವ 
ಹಗಲು ಇರುಳು ಒಂದಾಗಿ ಹಾಡುವ 
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು 

Category: ಕನ್ನಡ ಚಿತ್ರಸಾಹಿತ್ಯ
ವರ್ಗ: ಗೀತ ಚಿತ್ರ
ವರ್ಗ: ಚಿ.ಉದಯಶಂಕರ್ ಸಾಹಿತ್ಯ
ವರ್ಗ: ಎಸ್.ಪಿ.ಬಾಲ ಸುಬ್ರಮಣ್ಯಂ ಗಾಯನ
ವರ್ಗ: ಎಸ್.ಜಾನಕಿ ಗಾಯನ